ಜಾನುವಾರು ಜಾತ್ರಾ ಮೈದಾನದ ಕಲಾಮಂದಿರದಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿಯಿಂದ ಕಸ ಹಾಕುತ್ತಿರುವ ಬಗ್ಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರು ಹಾಗೂ ಶಿರಂಗಾಲ ಗ್ರಾಮ ಗ್ರಾಮಸ್ಥರು ತೀವ್ರ ವಿರೋಧ ಹಂಡ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯವರು ಸ್ಥಳಕ್ಕೆ ಬಂದು ಕಸ ತೆಗೆಯುವ ಭರವಸೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಸಿದ್ಧ ಜಾನುವಾರು ಜಾತ್ರೆ ನಡೆಯುವ ಸ್ಥಳದಲ್ಲಿ ಕಲಾಮಂದಿರ ಒಳಗೆ ಹಂಡ್ಲಿ ಗ್ರಾಮ ಪಂಚಾಯಿತಿಯಿಂದ ಕಸ ಶೇಖರಣೆ ಮಾಡಲಾಗುತ್ತಿತ್ತು ಕಸ ಶೇಖರಣೆಯಿಂದ ಅಕ್ಕಪಕ್ಕದ ಮನೆಗಳಿಗೆ ಹಾಗೂ ನಡೆದುಕೊಂಡು ಹೋಗುತ್ತಿರುವ ಜನರಿಗೆ ಹಾಗೂ ಮಕ್ಕಳಿಗೆ ಈ ಕಸದಿಂದ ವಾಸನೆ ಹಾಗೂ ಈ ಕಸ ಹಾಕಿರುವುದರಿಂದ ಇಲ್ಲಿ ನಾಯಿಗಳ ಹಾವಳಿಯಿಂದ ಶಾಲಾ ಮಕ್ಕಳಿಗೆ ಹಾಗೂ ನಡೆದಾಡುವ ಜನರಿಗೆ ತೊಂದರೆಯಾಗುತ್ತಿತ್ತು ಇದನ್ನು ಹಂಡ್ಲಿ ಗ್ರಾಮ ಪಂಚಾಯಿತಿಯವರಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಕರವೇ ಕಾರ್ಯಕರ್ತರಿಗೆ ಶಿರಂಗಾಲ ಗ್ರಾಮಸ್ಥರಿಂದ ತಿಳಿಸಿದ್ದರಿಂದ ಕರವೇ ಕಾರ್ಯಕರ್ತರು ಜಾತ್ರಾ ಮೈದಾನ ಸ್ಥಳಕ್ಕೆ ಬಂದು ಕಸ ಹಾಕಿರುವ ಜಾಗವನ್ನು ವೀಕ್ಷಣೆ ಮಾಡಿ ಕರವೇ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ರವರು ಹಂಡ್ಲಿ ಗ್ರಾಮ ಪಂಚಾಯಿತಿಯ ಅಭಿವದ್ಧಿ ಅಧಿಕಾರಿ ಯವರಿಗೆ ಫೋನ್ ನಲ್ಲಿ ಸಂಪರ್ಕ ಮಾಡಿ ಮಾತನಾಡಿ ಜಾತ್ರಾ ಮೈದಾನದಲ್ಲಿ ಕಸ ಹಾಕಿರುವ ಜಾಗಕ್ಕೆ ಬರುವಂತೆ ತಿಳಿಸಿದ ಮೇರೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಹಾಗೂ ಪಂಚಾಯತಿ ಸದಸ್ಯರಾದ ವೀರೇಂದ್ರರವರು ಸ್ಥಳಕ್ಕೆ ಬಂದ ಮೇಲೆ ಕರವೇ ಕಾರ್ಯಕರ್ತರು ಹಾಗೂ ಶಿರಂಗಾಲ ಗ್ರಾಮಸ್ಥರು ಕಸ ಹಾಕಿದ ಸ್ಥಳವನ್ನು ಸ್ಥಳವನ್ನು ವೀಕ್ಷಣೆ ಮಾಡುವಂತೆ ತಿಳಿಸಿದ ಮೇರೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ವೀರೇಂದ್ರರವರು ಇವರನ್ನು ಕರವೇ ಕಾರ್ಯಕರ್ತರು ಹಾಗೂ ಗ್ರಾಮಸ್ಥರಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಈ ಕಸವನ್ನು ಈಗಲೇ ತೆರವುಗೊಳಿಸುತ್ತೇವೆ ಅಧಿಕಾರಿಗಳಿಗೆ ಕರವೇ ಕಾರ್ಯಕರ್ತರು ಹಾಗೂ ನೆರೆದಿದ್ದ ಗ್ರಾಮಸ್ಥರು ತಿಳಿಸಿದರು ಹಾಗೆಯೇ . ಒಂದು ವೇಳೆ ಈ ಕಸವನ್ನು ಈ ಸ್ಥಳದಿಂದ ತೆರವುಗೊಳಿಸದೇ ಹೋದರೆ ಕರವೇ ಕಾರ್ಯಕರ್ತರು ಹಾಗೂ ಶಿರಂಗಾಲ ಗ್ರಾಮಸ್ಥರಿಂದ 1 ಗಾಡಿಯನ್ನು ಮಾಡಿ ಈ ಕಸವನ್ನು ಗ್ರಾಮ ಪಂಚಾಯಿತಿಯ ಎದುರುಗಡೆ ಸುರಿಯುತ್ತಿವೆ ಎಂದು ತಿಳಿಸಿದ ಮೇರೆಗೆ ಹಂಡ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಹಾಗೂ ಗ್ರಾಮ ಪಂಚಾಯತಿ ಸದಸ್ಯ ವಿರೇಂದ್ರ ರವರು ಮಾತನಾಡಿ ಈ ಕಸವನ್ನು ಈಗಲೇ ತೆರವುಗೊಳಿಸುತ್ತೇವೆ ಎಂದು ಭರವಸೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಶಿವರಾಮೇಗೌಡರ ಕರವೇ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಹಾಗೂ ಕರವೇ ಕಾರ್ಯದರ್ಶಿ ರಾಮನಹಳ್ಳಿ ಪ್ರವೀಣ್ ಹಾಗೂ ಕರವೇ ಕಾರ್ಯಕರ್ತರಾದ ರಂಜಿತ್ ಹಾಗೂ ಹಂಡ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಉಮೇಶ್. ಸಂಶುದ್ದೀನ್ . ಅದ್ರಾಮ್ . ಅಬ್ಬಾಸ್ . ರಾಜಣ್ಣ. ವಸಂತ . ನಿಡ್ತ ಗ್ರಾಮ ಪಂಚಾಯತ್ ಸದಸ್ಯರು ಮನು ಹಾಗೂ ಅಶ್ರಫ್ . ಮೊಯ್ದು . ಆನಂದ . ಲೋಹಿತ್ .ಅಬ್ದುಲ್.
ವರದಿ – ಸೋಮನಾಥ್ ಹೆಚ್,ಎಮ್.