ಸಾರ್ವಜನಿಕರಿಗೆ ಆದರ್ಶ ಮೋಹನ್ ಕುಮಾರ್ ದಾನಪ್ಪ- ಎಡಿಜಿಪಿ ರಾಮಚಂದ್ರ ರಾವ್…..
ಬೆಂಗಳೂರು:- ಸೆ 14 ರಂದು ಬಿಬಿಎಂಪಿ ಕಚೇರಿಯಲ್ಲಿ “ಆಗಸ್ಟ್ 15 ರಂದು 75 ನೇ ಸ್ವಾತಂತ್ರ್ಯ ಅಮೃತ್ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಆಂಬುಲೆನ್ಸ್ ಗೆ ದಾರಿ ಬಿಡಿ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ ಜಾಗೃತಿಗಾಗಿ ಬೆಂಗಳೂರು ನಗರದಲ್ಲಿ ರಾಷ್ಟ್ರಧ್ವಜ ಹಿಡಿದು 21 ಕಿ ಮೀ ಮ್ಯಾರಥಾನ್ ಮಾಡಿ ಜಾಗೃತಿ ಮೂಡಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಡಾ.ಮೋಹನ್ ಕುಮಾರ್ ದಾನಪ್ಪನವರಿಗೆ ಕರ್ನಾಟಕ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್ ವಿಭಾಗದ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಡಾ. ಕೆ. ರಾಮಚಂದ್ರ ರಾವ್. ಐಪಿಎಸ್. ಎಡಿಜಿಪಿರವರು ಇವರ ಸಾಮಾಜಿಕ ಕಳಕಳಿಯ ಕಾರ್ಯವನ್ನ ಅಭಿನಂದಿಸಿ ಪ್ರಶಂಸನೆ ಪತ್ರ ನೀಡಿ ಗೌರವಿಸಿದರು. ಇತ್ತೀಚಿನ ದಿನಗಳಲ್ಲಿ ಯುವಕರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ನಿರತರಾಗಿರುವುದರಿಂದ ಮಾನವೀಯ ಗುಣಗಳನ್ನ ಮರೆತಿರುವುದರಿಂದ ಯುವ ಸಮೂಹ ಮತ್ತು ಸಾರ್ವಜನಿಕರನ್ನ ಎಚ್ಚರಿಸುವ ವಿಶೇಷ ಆಸಕ್ತಿಯಿಂದ ಜನ ಸಾಮಾನ್ಯರಿಗೆ ಅರಿವು ಮೂಡಿಸುತ್ತಿದ್ದು ಸಾರ್ವಜನಿಕರಿಗೆ ಆದರ್ಶರಾಗಿರುತ್ತಾರೆ,ಈ ನಿಟ್ಟಿನಲ್ಲಿ ನಿರಂತರವಾಗಿ ಹಮ್ಮಿಕೊಳ್ಳುತ್ತಿರುವ ಜಾಗೃತಿ ಕಾರ್ಯಕ್ರಮವನ್ನ ಅವರ ಈ ಸಮಾಜಮುಖಿ ನಡೆಗೆಯನ್ನ ಅಭಿನಂದಿಸಿ ಪ್ರಶಂಸಾ ಪತ್ರ ನೀಡುವ ಮೂಲಕ ಹಾರೈಸಿದ್ದಾರೆ.
ವರದಿ – ಮಹೇಶ ಶರ್ಮಾ