ಆಮ್ ಆದ್ಮಿ ಪಾರ್ಟಿ ತಾವರಗೇರಾ ಹಾಗೂ ಪ್ರಗತಿ ಪರ ಒಕ್ಕೂಟದವರಿಂದ ಭೂ ಕಬಳಿಕೆ ಮಾಡಿದವರ ವಿರುದ್ಧ ಹಾಗೂ ಭ್ರಷ್ಟ ಅಧಿಕಾರಿಗಳ ನಡೆ ಖಂಡಿಸಿ ಉಗ್ರ ಹೋರಾಟ……
ಆಮ್ ಆದ್ಮಿ ಪಾರ್ಟಿ ಹಾಗೂ ಪ್ರಗತಿಪರ ಒಕ್ಕೂಟ ತಾವರಗೇರಾ ಇವರವತಿಯಿಂದ ಸರ್ಕಾರಿ ಜಮೀನು ಕಬಳಿಕೆ ಮಾಡಿದ ಭ್ರಷ್ಟರ ವಿರುದ್ದ ಹಾಗೂ ಭೂ ಕಬಳಿಕೆ ಮಾಡಿದ ಭ್ರಷ್ಟರಿಗೆ ಸಾತ್ ನೀಡಿದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕ್ಕಾಗಿ ಹಮ್ಮಿಕೊಂಡ ಮೊದಲನೆ ಹಂತದ ಹೋರಾಟಕ್ಕೆ ಭರವಸೆ ನೀಡಿದ ಮಾನ್ಯ ತಹಶಿಲ್ದಾರರಾದ ಗುರುರಾಜ್ ಎಮ್ ರವರು.
1) ಸ.ನಂ. 51 ರಲ್ಲಿ 1.ಎ 22 ಗುಂ. ಜಮೀನು ಇದ್ದು. ಇದೆ ಜಮೀನಿನಲ್ಲಿ 1987-88 ರಲ್ಲಿ ಮಾನ್ಯ ಸಹಾಯಕ ಆಯುಕ್ತರು ಲಿಂಗಸೂಗೂರು ರವರು 17 ಜನರಿಗೆ ಭೂ ಮಂಜೂರು ಮಾಡಿದ್ದು. ಇನ್ನೂಳಿದ ಭೂಮಿಯಲ್ಲಿ 12 ಜನರು ಭೂ ಕಬಳಿಕೆ ಮಾಡಿದ್ದವರ ವಿರುದ್ದ ಸೂಕ್ತ ಕ್ರಮ ಜರುಗಿಸಿ ಆ ಜಮೀನು ಸರಕಾರಕ್ಕೆ ಒಪ್ಪಿಸಬೇಕು.
2) ಸ.ನಂ 52 ರಲ್ಲಿ 3 ಎ 12 ಗುಂಟೆ ಜಮೀನು ಇದ್ದು. ಅಂದರೆ 16 ಗುಂಟೆ ಜಮೀನು ಕುಂಬಾರ ಕೈಗಾರಿಕೆಗೆ.
1 ಎ 30 ಗುಂಟೆ ಜಮೀನು ksrtc ಗೇ.
1 ಎಕರೆ 6 ಗುಂಟೆ ಜಮೀನು ಪುಂಡಲೀಕಪ್ಪರವರದ್ದು. ಇದೇ ಜಮೀನಿನಲ್ಲಿ ಒಬ್ಬರಿಗೆ 2001-2002 ರಲ್ಲಿ ತಹಶಿಲ್ದಾರರವರು ಭೂ ಆದೇಶ ನೀಡಿದ್ದು. ಇನ್ನೂಳಿದ ಭೂಮಿಯಲ್ಲಿ 24 ಶೆಡ್ಡು ಹಾಗೂ ವಾಣಿಜ್ಯ ಮಳಿಗೆಗೆ ಸಂಬಂಧಿಸಿದ ಮೂಲ ದಾಖಲಾತಿ ಪ್ರತಿ ಸೂಕ್ತವಾಗಿ ನೀಡಬೇಕು. ಹಾಗೂ ಸರಕಾರಿ ಭೂಮಿ ಕಬಳಿಕೆ ಮಾಡಿದವರಿಗೆ ಹಾಗೂ ಭೂ ಕಬಳಿಕೆ ಮಾಡಿದವರಿಗೆ ಸಾತ್ ನೀಡಿದ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
3) ಸ.ನಂ. 54 ರಲ್ಲಿ 18 ಎ.36 ಗುಂಟೆ. ಜಮೀನು ಇದ್ದು. ಇದು ಸದ್ಯ ಸಾರ್ವಜನಿಕರ ಮುಕ್ತಿಧಾಮ (ರುದ್ರಭೂಮಿ) ಇದೆ. ಇದೇ ಭೂಮಿಯಲ್ಲಿ ಅಕ್ರಮವಾಗಿ ಹಾಲಿನ ಕೇಂದ್ರದ ಮುಂದೆ ಹೊಸ ಶೆಡ್ಡು ಹಾಕಿರುವುದನ್ನು ಕೂಡಲೆ ತೇರವುಗೊಳಿಸಬೇಕು. ಜೊತೆಗೆ ಇನ್ನೂಳಿದ ಜಮೀನಿನಲ್ಲಿ ಭೂ ಕಬಳಿಕೆ ಆಸ್ತಿಯನ್ನು ಸರಕಾರಕ್ಕೆ ತೆಗೆದುಕೊಂಡು ಸರಕಾರಕ್ಕೆ ಆಧಾಯ ಬರುವಂತೆ ಮಾಡಬೇಕು.
4) ನಿ.ನಿ. ಅಂದರೆ ಮೂಲ ಗೌಂವಠಾಣ ಜಮೀನಿನಲ್ಲಿ ಅಂದರೆ ಗ್ರಾ.ಪಂ.ಕಾಯ್ದೆ ಪ್ರಕಾರ ಕಡು/ಬಡವ/ನಿರ್ಗತಿಕ ಕುಟುಂಬಗಳಿಗೆ ಭೂ ಹಂಚಿಕೆ ಮಾಡಬೇಕು ಅದು ಗ್ರಾಮ ಸಭೆ ಮಾಡಿ. ಆದರೆ
2009 ರಲ್ಲಿ ಕಾನೂನು ಬಾಹಿರವಾಗಿ ಗ್ರಾಮ ಸಭೆ ಮಾಡದೆ, ಕೇವಲ ಸಾಮಾನ್ಯ ಸಭೆ ಮಾಡಿ ಕೇವಲ ಒಬ್ಬ ಸದಸ್ಯರಿಗೆ ಠರಾವು ಪಾಸು ಮಾಡಿರುವುದು ಎಷ್ಟರ ಮೆಟ್ಟಿಗೆ ಸರಿ. ಜೊತೆಗೆ ಇದೆ ಭೂಮಿಘೆ ಸಂಬಂಧಿಸಿದಂತೆ ತಮ್ಮ ಪ.ಪಂ.ಕಾರ್ಯಲಯದಿಂದ ನೀಡಿದ ದೃಢೀಕರಣದಲ್ಲಿ ಅಂದರೆ 2009 ರಲ್ಲಿ ಠರಾವು ಪಾಸು ಮಾಡಿದ ಪ್ರತಿಯಲ್ಲಿ ಪೂರ್ವಕ್ಕೆ ಸರಕಾರಿ ಜಾಗ ಎಂದು ದೃಢೀಕರಣ ನೀಡಿರುತ್ತಿರಿ. ಸದ್ಯ ಇದೇ ಭೂಮಿಯಲ್ಲಿ ಭೂ ಕಬಳಿಕೆ ಮಾಡಿದ ಭ್ರಷ್ಟರಿಗೆ ಪಟ್ಟ ಭೂಮಿ ಎಂದು ದೃಢೀಕರಣ ನೀಡಿರುವ ಪ.ಪಂ.ಮುಖ್ಯಾಧಿಕಾರಿಯನ್ನು ಕೂಡಲೆ ಅಮಾನತು ಗೊಳಿಬೇಕು. ಕಾರಣ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಮಾನ್ಯ ತಹಶಿಲ್ದಾರರು ಪಟ್ಟ ಭೂಮಿಯೆಂದು ದೃಢೀಕೃತವಾಗಿ ದಾಖಲೆ ನೀಡಲು ಪವರ್ ಇದೆ. ಆದರೆ ಪ.ಪಂ.ಮುಖ್ಯಾಧಿಕಾರಿ ನೀಡಿರುವ ಖೋಟ್ಟಿ ದಾಖಲೆ ಸೃಷ್ಟಿಸಿರು ಹಾಗೂ ಭೂ ಕಬಳಿಕೆಯವರಿಗೆ ಸಾತ್ ನೀಡುವ ಅಧಿಕಾರಿಯನ್ನೂ ಕೂಡಲೇ ಸರ್ಕಾರಿ ನೌಕರಿಯಿಂದ ವಜಾಗೊಳಿಸಬೇಕು.ಜೊತೆಗೆ 10ನೇ ವಾರ್ಡಿನಲ್ಲಿ ಹಾದು ಹೋಗುವ ಸಾರ್ವಜನಿಕ ಅಂಗಳವನ್ನು ವತ್ತುವರಿಮಾಡಿರುವುದನ್ನು ತೇರವುಗೊಳಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಹಾಗೂ ಪ್ರಗತಿಪರ ಒಕ್ಕೂಟದಿಂದ ಮಾನ್ಯ ತಹಶಿಲ್ದಾರರಿಗೆ ಆಗ್ರಹ ಮಾಡಿದರು. ಇದರ ಪ್ರಯುಕ್ತವಾಗಿ ಮಾನ್ಯ ತಹಶಿಲ್ದಾರ ಗುರುರಾಜ ಎಮಂ ರವರು ಈ ಎಲ್ಲಾ ಬೇಡಿಕೆಗಳಿಗೆ ನಮಗೆ ಕೆಲವು ದಿನ ಕಾಲವಕಾಶ ನೀಡಿ. ಸದ್ಯ ಯಾರೆ ನಮ್ಮ ಸರ್ಕಾರಿ ಜಮೀನಿನಲ್ಲಿ ಒತ್ತುವರಿ ಮಾಡಿದ್ದಾರೆ ಖಂಡಸಿತವಾಗಿಯು ನಾನು ತೇರವುಗೊಳಿಸುತ್ತೆನೆ. ಜೋತೆಗೆ ಇನ್ನೂ ಮುಂದೆ ಈ ಎಲ್ಪಾ ಸರ್ಕಾರಿ ಜಮೀನೀಗೆ ಸಂಬಂಧಿಸಿದಂತೆ ಯಾರೇ ವತ್ತುವರಿ ಮಾಡಲು ಬಂದರೆ ಬೀಡುವುದಿಲ್ಲ ಎಂದು ಖಡಕ್ಕಾಗಿ ಭರವಸೆ ನೀಡಿರುವುದಕ್ಕೆ. ಆಮ್ ಆದ್ಮಿ ಪಾರ್ಟಿ ಹಾಗೂ ಪ್ರಗತಿಪರ ಒಕ್ಕೂಟದಿಂದ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಶರಣಪ್ಪ ಧಾಸರ್, ಸೂರ್ಯಕಾಂತ್, ರವಿಕುಮಾರ್, ಹಾಗೂ ನಾಡ ಕಚೇರಿಯ ಸಿಬಂದಿ ವರ್ಗ, ಜೊತೆಗೆ ಪಟ್ಟಣದ ಪೊಲೀಸ್ ಇಲಾಖೆಯ ಸಿಬಂದಿಗಳ ಸಹಕಾರದೊಂದಿಗೆ ಈ ಧರಣಿಯನ್ನು ಹಿಂದಕ್ಕೆ ತೇಗೆದುಕೊಂಡರು. ಸಾರ್ವಜನಿಕರಲ್ಲಿ ಒಂದು ಅನುಮನದ ಸುತ್ತ. ಅಧಿಕಾರಿಗಳು ಅಶ್ವಾಸನೆ ನೀಡಿ ಯಾವುದೇ ಕ್ರಮ ತೇಗೆದುಕೊಳ್ಳುವಲ್ಲಿ ವಿಪಲವಾದರೆ ನಮ್ಮ ಈ ಹೋರಾಟ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದರು. ಇದರ ಜೊತೆಗೆ ಸಾರ್ವಜನಿಕರಲ್ಲಿ ಮಾನ್ಯ ತಹಶಿಲ್ದಾರರ ಭರವಸೆ ನೀಡಿರುವ ಹೇಳಿಕೆಯಂತೆ ಕಾರ್ಯ ನಿರ್ವಹಿಸುತ್ತಾರ ಎಂಬ ಮಾತುಗಳು / ಹಾಗೂ ಅನುಮಾನಗಳು ಕೇಳಿ ಬರುತ್ತಿವೆ. ಆದರೂ ಮಾನ್ಯ ತಹಶಿಲ್ದಾರರವರ ಮುಂದಿನ ನಡೆ ಹೇಗಿರುತ್ತೆ ಎಂಬುಹುದು ಕಾದು ನೋಡಬೇಕಾಗಿದೆ. ಈ ಸಂದರ್ಭದಲ್ಲಿ AAP ಜಿಲ್ಲಾಧ್ಯಕ್ಷರಾದ ಹುಸೇನಸಾಬ್ ಗಂಗನಾಳ. ಹಾಗೂ ಜಿಲ್ಲಾ ಪ್ರಧಾನ ಕಾರ್ಯಧರ್ಶಿಯಾದ ಸಿದ್ದಲಿಂಗೇಶ ಮುತ್ತಾಳ, ಬಸವರಾಜ ಮ್ಯಾಗಳಮನಿ, ತಾಲೂಕ ಅಧ್ಯಕ್ಷರಾದ ರವಿಕುಮಾರ ಹೋಸಮನಿ. ಪ್ರಗತಿಪರ ಒಕ್ಕೂಟದ ಹಿರಿಯ ಮುಖಂಡರು ಹಾಗೂ ಹಿರಿಯ ಹೋರಾಟಗಾರರಾದ ಆನಂದ ಬಂಡಾರಿಯವರು. ರಾಜಾನಾಯಕ fitu ರಾಜ್ಯ ಪ್ರಧಾನ ಕಾರ್ಯದರ್ಶಿ,ಕ.ನ.ನಿ.ಸೇನೆಯ ಅಧ್ಯಕ್ಷರಾದ ಸಿದ್ದನಗೌಡ ಪುಂಡಗೌಡರು. AAPಯ ಹೋಬಳಿ ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ದ. AAPಯ ತಾಲೂಕ ಪ್ರಧಾನ ಕಾರ್ಯದರ್ಶಿ ಬಾಲರಾಜ ಯಾದವ. ಹಾಗೂ ರೈತ ಸಂಘದ ಅಧ್ಯಕ್ಷರಾದ ರವಿ ಆರೇರ್. ಉಪಾಧ್ಯಕ್ಷರಾದ ಖಾಜಾಖಾನ್ ಪಠಾಣ. ಹಾಗೂ ಶ್ಯಾಮೀದಸಾಬ್ ಮೆಣೆದಾಳ ರೈತ ಸಂಘದ ಮುಖಂಡರು. AAPಯ ಯುವ ಘಟಕ ಅಧ್ಯಕ್ಷರಾದ ಉಪ್ಪಳೇಶ ನಾರಿನಾಳ. ಮಾದ್ಯಮ ಸಂಯೋಜಕರಾದ ಸೋಮನಾಥ್ ಹೆಚ್.ಎಮ್. ಸದಸ್ಯರಾದ ಮಂಜುನಾಥ್ ಎಸ್.ಕೆ. ಲಾಲು ನಾಯಕ ಲಂಬಾಣಿ. ಆರ್.ಬಿ.ಅಲಿಆದಿಲ್. ಸೂಮನಾಥ ಹುಲಿಹೇದರ್, ದೇವಣ್ಣ ಹುನಗುಂದ್, ವೀರೇಶ ನವಲಿ.ಮಲ್ಲೇಶ ಹುನಗುಂದ್, ಶಶೀ ನವಲಿ. ನಾಗೇಶ ಹುನಗುಂದ. ಹಾಗೂ ಊರಿನ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.
https://m.facebook.com/story.php?story_fbid=pfbid0ThqHHRQvh4EfB2iBuR1eqjWceFQWcrPdrVuL9TLHXVmrV2bu9xvX7ThTpNbwLtHBl&id=100071114994092&sfnsn=wiwspmo
https://m.facebook.com/story.php?story_fbid=537139401514356&id=100024448835682&sfnsn=wiwspmo ಲಿಂಕ ಓಪನ್ ಮಾಡಿ ಸಂಪೂರ್ಣ ವಿಡಿಯೋ ನೋಡಿ.
ವರದಿ – ಸಂಪಾದಕೀಯಾ