ಮತದಾನದ ಜಾಗೃತಿಗೆ ದೆಹಲಿಯಲ್ಲಿ 3 ಗಂಟೆ ರಾಷ್ಟ್ರಧ್ವಜ ಹಿಡಿದು ಮೋಹನ್ ಕುಮಾರ್ ರಿಂದ ಓಟ,
ನವದೆಹಲಿ ಸೆ: 17 ರಂದು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 72 ನೇ ಜನ್ಮ ದಿನದ ಅಂಗವಾಗಿ ಬಳ್ಳಾರಿ ಜಿಲ್ಲೆ ಕಂಪ್ಲಿ ನಿವಾಸಿ ಕರ್ನಾಟಕ ಹೈ ಕೋರ್ಟಿನ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಮತದಾನ ಜಾಗೃತಿಗಾಗಿ ನವದೆಹಲಿಯಲ್ಲಿ 3 ಗಂಟೆ ತಡೆರಹಿತ ಮ್ಯಾರಥಾನ್ ಓಟ ನಡೆಸುವ ಮೂಲಕ ಜಾಗೃತಿ ನಡೆಸಿದರು! ಜಾಗೃತಿ ಓಟಕ್ಕೆ ಚಾಲನೆಯನ್ನ ಭಾರತ ಸರ್ಕಾರದ ಸುಪ್ರೀಂ ಕೋರ್ಟ್ ನ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾರವರಾದ ಕೆ.ಎಂ.ನಟರಾಜ್ ರವರು ರಾಷ್ಟ್ರಧ್ವಜ ನೀಡುವ ಮೂಲಕ ಓಟಕ್ಕೆ ಚಾಲನೆ ನೀಡಿದರು, ನಂತರ ಬಲಗೈನಲ್ಲಿ ರಾಷ್ಟ್ರಧ್ವಜ,ಎಡಗೈನಲ್ಲಿ ಕರ್ನಾಟಕ ಧ್ವಜವನ್ನ ಹಿಡಿದು ಕರ್ನಾಟಕ ಭವನದಿಂದ ಓಟ ಪ್ರಾರಂಭಿಸಿದ ಮೋಹನ್ ಕುಮಾರ್ ದಾನಪ್ಪ ಇಂದಿರಾ ಗಾಂಧಿ ಸ್ಮಾರಕ, ರಾಯಭಾರಿ ಕಚೇರಿ ಅಕ್ಬರ್ ರಸ್ತೆ, ಇಂಡಿಯಾ ಗೇಟ್, ಜನಪಥ್ ರಸ್ತೆ, ಸುಪ್ರೀಂ ಕೋರ್ಟ್, ರಾಜ್ ಘಾಟ್, ರಾಷ್ಟ್ರಪತಿ ಭವನ್ ಮೂಲಕ ಕೆಂಪುಕೋಟೆಗೆ ತಲುಪಿದರು, ನಂತರ ಮಾತನಾಡಿದ ಮೋಹನ್ ಕುಮಾರ್ ರವರು ಮತದಾನ ನಮ್ಮ ಸಾಂವಿಧಾನಿಕ ಹಕ್ಕು, ಮತದಾನ ಮಾಡುವುದು ಸಹ ನಮ್ಮ ಆದ್ಯ ಕರ್ತವ್ಯ, ಮತದಾನ ಮಾಡಬೇಕಾದ ನಾಗರೀಕ ಪ್ರಭುಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರತರಾಗಿರುವುದು ಮತ್ತು ಜವಾಬ್ದಾರಿಗಳ ಬಗ್ಗೆ ಉದಾಸೀನ ತೋರುತ್ತಿರುವುದರಿಂದ ಚುನಾವಣೆಗಳ ಮತದಾನದ ಶೇಕಡಾ ನೂರರಷ್ಟು ತಲುಪಲು ಅಸಾಧ್ಯವಾಗಿದೆ, ಮುಂಬರುವ ವಿಧಾನ ಸಭಾ, ಲೋಕಸಭಾ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ತಿಳಿಸಿದರು, ಕರ್ನಾಟಕದಿಂದ 2600 ಕಿ ಮೀ ದೂರದಲ್ಲಿರುವ ದೆಹಲಿಗೆ ಆಗಮಿಸಿ ವಿನೂತನ ಮ್ಯಾರಥಾನ್ ಕೈಗೊಂಡಿರುವುದು ಕರ್ನಾಟಕದಿಂದ ಪ್ರಥಮ ಪ್ರಯತ್ನವೆಂದರು, ಈ ಜಾಗೃತಿ ಮ್ಯಾರಥಾನ್ ನ ಯಶಸ್ಸನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ಕೆ.ಎಂ.ನಟರಾಜ್, ಎಂ ಎಸ್ ಐ ಎಲ್ ನ ನಿರ್ದೇಶಕ ಡಾ.ಎ.ಎಂ ಚಂದ್ರಪ್ಪ ನವರಿಗೆ ಸಲ್ಲಿಸಿದರು! ಈ ಜಾಗೃತಿ ಓಟಕ್ಕೆ ರಾಜ್ಯದ ಸಚಿವರು, ಶಾಸಕರು, ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು ಹಾಗೂ ಹೈ ಕೋರ್ಟಿನ ಎಎಜಿ, ಎಎಸ್ಜಿಗಳು ಮೆಚ್ಚುಗೆ ವ್ಯಕ್ತ ಪಡಿಸಿದರು!
ವರದಿ – ಸೋಮನಾಥ ಹೆಚ್ ಎಮ್