ಆಮ್ ಆದ್ಮಿ ಪಕ್ಷದ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ..
ಇಂದು ಆರ್ಮ್ ಆದ್ಮಿ ಪಕ್ಷದ ಗಂಗಾವತಿ ಜಿಲ್ಲಾ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಆಚರಿಸಲಾಯಿತು ಪಕ್ಷದ ಕಾರ್ಯಾಲಯದಲ್ಲಿ ಮಾಜಿ ಸೈನಿಕರಾದ ಕೆ ಬಸವರಾಜ್ ಅವರು ಧ್ವಜಾರೋಹಣ ನೆರವೇರಿಸಿದರು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೆ ಬಸವರಾಜ್ ಅವರು ಆಗಸ್ಟ್ 15 1947 ರಲ್ಲಿ ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ ಸಹ ಹೈದರಾಬಾದ್ ಕರ್ನಾಟಕ ಭಾಗಕ್ಕೆ ನಿಜಾಮನ ಆಳ್ವಿಕೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ ಭಾರತದ ಒಕ್ಕೂಟವನ್ನು ಸೇರಲು ಒಪ್ಪಿಕೊಳ್ಳದ ನಿಜಾಮನ ವಿರುದ್ಧ ಮಾಜಿ ಗೃಹ ಮಂತ್ರಿ ಗಳಾದ ಸರ್ದಾರ್ ವಲ್ಲಭಾಯಿ ಪಟೇಲ್ ರವರು ದಿಟ್ಟ ನಿರ್ಧಾರ ಮಾಡಿ ದೇಶದ ಸೈನ್ಯ ಶಕ್ತಿಯ ಮೂಲಕ ಹೈದರಾಬಾದ್ ನಿಜಾಮನ ಆಳ್ವಿಕೆಯಿಂದ ಈ ಭಾಗವನ್ನ ವಿಮೋಚನೆ ಗೊಳಿಸಿದರು ಮೊದಲಿಂದಲೂ ಈ ಭಾಗ ಹಿಂದುಳಿದ ಪ್ರದೇಶವಾಗಿದ್ದರೂ ಸಹ ಈ ಭಾಗಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಬರುತ್ತಿದ್ದರು ಕೂಡ ಅಭಿವೃದ್ಧಿ ಮಾತ್ರ ಶೂನ್ಯ. ಇದಕ್ಕೆ ರಾಜಕಾರಣಿಗಳ ದಿವ್ಯ ನಿರ್ಲಕ್ಷವೇ ಸಾಕ್ಷಿ ಈ ಭ್ರಷ್ಟಾ ವ್ಯವಸ್ಥೆ ವಿರುದ್ಧ ನಾವೆಲ್ಲರೂ ಸೇರಿ ಒಟ್ಟುಗೂಡಿ ಹೋರಾಟ ಮಾಡಬೇಕಿದೆ ಎಂದರು. ನಂತರ ಮಾತನಾಡಿದ ತಾಲೂಕು ಅಧ್ಯಕ್ಷರಾದ ಶರಣಪ್ಪ ಸಜ್ಜಿ ಹೊಲ ರವರು ಹೈದರಾಬಾದ್ ಕರ್ನಾಟಕ ಪ್ರದೇಶವು ಹಿಂದುಳಿಯಲು ನಮ್ಮ ಜನಪ್ರತಿನಿಧಿಗಳ ಸರ್ಕಾರದ ದಿವ್ಯ ನಿರ್ಲಕ್ಷವೇ ಕಾರಣ . ಈ ಭಾಗಕ್ಕೆ 371 ಜೆ ಕಲಂ ಜಾರಿಯಾಗಿದ್ದರು ಕೂಡ ಅದರ ಪ್ರತಿಫಲವನ್ನು ಇದುವರೆಗೂ ಈ ಭಾಗದ ಜನ ಅನುಭವಿಸುತ್ತಿಲ್ಲ ಕಾರಣ ಇಲ್ಲಿನ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಪ್ರತಿಯೊಂದನ್ನು ಹೋರಾಟದ ಮೂಲಕವೇ ನಾವು ಪಡೆಯಬೇಕಾಗಿದೆ ನಾವೆಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಗಟ್ಟಿಗೊಳಿಸಿ ಸ್ವಚ್ಛ ಆಡಳಿತ ನೀಡುತ್ತಿರುವ ಆಮ್ ಆದ್ಮಿ ಪಕ್ಷವನ್ನು ಅಧಿಕಾರಕ್ಕೆ ತಂದು ಹೈದರಾಬಾದ್ ಕರ್ನಾಟಕವನ್ನ ಅಭಿವೃದ್ಧಿ ಪಡಿಸೋಣ ಅದಕ್ಕಾಗಿ ನಾವೆಲ್ಲರೂ ಪಣತೊಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು .ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಹುಸೇನ್ ಸಾಬ್ ಗಂಗನಾಳ, ಕನಕಗಿರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ರಮೇಶ್ ಕೋಟಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧಲಿಂಗೇಶ್ವರ ಮುತ್ತಳ್, ಜಿಲ್ಲಾ ಖಜಾಂಚಿ ದೊಡ್ಡಬಸಪ್ಪ ,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ರೇಣುಕಾ ಬಸವರಾಜ್, ನಗರ ಘಟಕ ಅಧ್ಯಕ್ಷರಾದ ಪರಶುರಾಮ್ ಒಡೆಯರ್ , ವಿಕ್ರಂ ,ಟಿಪ್ಪು ಸುಲ್ತಾನ್, ರಾಘವೇಂದ್ರ ಕಡೆ ಬಾಗಿಲು, ಚಾಂದ್ ಪಾಷಾ, ಬಸವರಾಜ್ ,ದೇವರಾಜ್, ಭೋಗೇಶ್ ಆನೆಗುಂದಿ ,ದುರ್ಗೇಶ್ ಹೊಸಳ್ಳಿ ,ಭಗವಾನ್ ರಾಂಪುರ್, ಗಣೇಶ್ ,ವಿರುಪಣ್ಣ ,ಬಸಮ್ಮ, ದಾಕ್ಷಾಯಿಣಿ ಮುಂತಾದವರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ – ಸಂಪಾದಿಕೀಯ