ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕುಂಬಾರ ಓಣಿಯ ಬಾವಿಯೊಂದರಲ್ಲಿ ಕಾಲು ಜಾರಿ ಬಿದ್ದ ಬೆಕ್ಕು.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕುಂಬಾರ ಓಣಿಯ ಬಾವಿಯೊಂದರಲ್ಲಿ ಬೆಕ್ಕು ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ ದಿನಾಂಕ 14/09/2022 ರಂದು ಸಮಯ ಸಾಯಂಕಾಲ 06:14ಕ್ಕೆ ಬುಧವಾರ ನಡೆದಿದೆ. ತಕ್ಷಣ ಪಟ್ಟಣದ ಸ್ಥಳೀಯರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಜಲವಾಹನ ಮತ್ತು ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ಹಾಗೂ ಸಿಬ್ಬಂದಿಯವರು, ರಕ್ಷಣಾ ಸಾಮಗ್ರಿಗಳೊಂದಿಗೆ ಶ್ರೀ .ವಾಯ್.ಬಿ.ಕೌಜಲಗಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿರವರ ನೇತೃತ್ವದಲ್ಲಿ ಸಿಬ್ಬಂದಿಯವರು ಒಳಗೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ತೆರೆದ ನೀರಿರುವ ಬಾವಿಯಲ್ಲಿ ಅಂದಾಜು 50×60ಅಳತೆಯ 60ರಿಂದ 65ಅಡಿ ಆಳದಲ್ಲಿ ಬೆಕ್ಕು ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವುದನ್ನು ಕಪ್ಟ ಪಟ್ಟು ಸುಮಾರು 00 ಗಂಟೆ 50 ನಿಮಿಷಗಳ ಕಾರ್ಯಚರಣೆಯನ್ನು ಮಾಡಿ ಬೆಕ್ಕನ್ನು ಜೀವಂತವಾಗಿ ನೀರಿರುವ ಬಾವಿಯಿಂದ ಹೊರ ತೆಗೆದು ರಕ್ಷಣೆ ಮಾಡಲಾಯಿತು. *ಈ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಯವರ ವಿವರಗಳು* 01)ಶ್ರೀ .ವಾಯ್.ಬಿ. ಕೌಜಲಗಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ 02)ಶ್ರೀ.ಎಮ್.ಎಮ್. ಬಂದಾಳ ಪ್ರಮುಖ ಅಗ್ನಿಶಾಮಕರು. 03) )ಶ್ರೀ.ಎಮ್.ಬಿ. ಬಿರಾದಾರ ಪ್ರಮುಖ ಅಗ್ನಿಶಾಮಕರು. 04) ಶ್ರೀ ಎಮ್. ಎಸ್.ಕುಂಬಾರ ಅಗ್ನಿಶಾಮಕ ಚಾಲಕರು 05)ಶ್ರೀ ಶಿವಾನಂದ ಪೂಜಾರಿ ಅಗ್ನಿಶಾಮಕರು 06) ಶ್ರೀ ಎಸ್.ಎಮ್. ಮಾದರ. ಅಗ್ನಿಶಾಮಕರು 07) ಶ್ರೀ.ಆರ್.ಕೆ.ಗುರವ.- ಅಗ್ನಿಶಾಮಕರು 08)ಶ್ರೀ.ಆರ್.ಎಲ್.ಸಂಗಮ ಅಗ್ನಿಶಾಮಕರು 09)ಶಿವಯ್ಯ.ಮಠಪತಿ ಅಗ್ನಿಶಾಮಕರು 10)ಶ್ರೀ.ಪ್ರಕಾಶ. ಆಲಿಶೇಟ್ಟಿ ಅಗ್ನಿಶಾಮಕರ 11) ಶ್ರೀ.ಸಂಜೀವ. ಚೌಗಲಾ.ಅಗ್ನಿಶಾಮಕರು. 12) ಸಂತೋಷ.ಚೌಗುಲಾ.ಅಗ್ನಿಶಾಮಕರು. 13) ಶ್ರೀ.ಸಂತೋಷ.ಆರ್.ಧರಮಟ್ಟಿ. ಅಗ್ನಿಶಾಮಕರು ಚೌಗಲಾ. ಅಗ್ನಿಶಾಮಕ ಸಿಬ್ಬಂದಿಯವರು ಇತರರು ಮತ್ತು ಪಟ್ಟಣದ ಸ್ಥಳೀಯರು ಕಾರ್ಯಾಚರಣೆ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಅಥಣಿ ಅಗ್ನಿಶಾಮಕ ಇಲಾಖೆಗೆ ಅಗ್ನಿಶಾಮಕದ ಸಿಬ್ಬಂದಿ ಯವರುಗಳಿಗೆ ಚಪ್ಪಾಳೆ ಮೂಲಕ ತುಂಬಾ ತುಂಬಾ ಧನ್ಯವಾದಗಳು ತಿಳಿಸಿದರು ನೀವು ಮಾಡುವ ಕೆಲಸ ಜೀವ ರಕ್ಷಿಸುವ ಕೆಲಸವಾಗಿದೆ ಭಗವಂತ ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಸದಾಕಾಲ ಉನ್ನತಮಟ್ಟಕ್ಕೆ ಮತ್ತು ದೊಡ್ಡ ಹುದ್ದೆಗಳನ್ನು ಸ್ವೀಕರಿಸಲಿ ಎಂದು ಹೇಳಿದರು.
ವರದಿ – ಮಹೇಶ ಶರ್ಮಾ