ಮುಂದಿನ ತಲೆಮಾರುಗಳಿಗೆ ಸಂಗೀತ ಕಲಾಪರಂಪರೆ ಉಳಿಬೇಕು- ಕೊಟ್ರೇಶ ಮರಬನಹಳ್ಳಿ.

Spread the love

ಮುಂದಿನ ತಲೆಮಾರುಗಳಿಗೆ ಸಂಗೀತ ಕಲಾಪರಂಪರೆ ಉಳಿಬೇಕುಕೊಟ್ರೇಶ ಮರಬನಹಳ್ಳಿ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಲ್ಪುರ ಸಾಂಸ್ಕೃತಿಕ ಕಲಾ ಸಂಘದ ಆಶ್ರಯದಲ್ಲಿ ಸುಗಮ ಸಂಗೀತ ಕಲಾವಿದರಾದ ವಿರಯ್ಯ ಸ್ವಾಮಿ ಆಡೂರ ಮತ್ತು ಜಾನಪದ ಕಲಾವಿದರಾದ ಖಾನಸಾಬ್ ತಬಲಾಜಿ ಅವರು ಕಲ್ಲೂರಿನ ಶ್ರೀ ಕಲ್ಲಿನಾಥೇಶ್ವರ ಕಲಾಮಂದಿರದಲ್ಲಿ ಜಾನಪದ ಸಂಗೀತ ಕಾರ್ಯಕ್ರಮವನ್ನ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಕಲ್ಲಪ್ಪ ಕವಳಕೇರಿ ವಹಿಸಿಕೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ   ಕಾರ್ಯಕ್ರಮವನ್ನ ಉದ್ಘಾಟಿಸಿ  ಮಾತನಾಡಿದ ಅವರು ಕಲ್ಲೂರ ಗ್ರಾಮ ಕಲಾವಿದರ ತವರು ಶ್ರೀ ಕ್ಷೇತ್ರ ದಕ್ಷಿಣದ ಕಾಶಿ ಕಲಾವಿದರು ಕಾರ್ಯಕ್ರಮ ಮಾಡುವವರು ಇಲಾಖೆಗೆ ಬಂದು ಅರ್ಜಿಯನ್ನ ಸಲ್ಲಿಸಿ ಕಾರ್ಯವನ್ನು ಪಡೆದು ಕೊಳ್ಳು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿಕೊಂಡ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಕಲ್ಲಪ್ಪ ಕವಳಕೇರಿ ಮಾತನಾಡಿ ನಮ್ಮ ಗ್ರಾಮ ಕಲೆ,ಸಾಹಿತ್ಯ,ಸಂಸ್ಕೃತಿಯ ತವರು ನಾಡಿನ ಹೆಸರಾಂತ ಶ್ರೀ ಮಠಕ್ಕೆ ಮಠಾಧಿಪತಿಗಳನ್ನ ನೀಡಿ ಗ್ರಾಮ ನಮ್ಮದು ಮುಂದಿನ ತಲೆಮಾರುಗಳಿಗೆ ಈ ಪರಂಪರೆಯನ್ನ ತೆಗೆದುಕೊಂಡು ಹೊಗುವ ಜವಬ್ದಾರಿ ನಮ್ಮೇಲ್ಲರ ಮೇಲಿದೆ,ಕಲ್ಲೂರು ಕಲಾವಿದರ ತವರೂರು ಸಮಾಜಮುಖಿ ಕೆಲಸ ಕಲಾಪ್ರೊತ್ಸವಕ್ಕೆ ಯಾವತ್ತೂ ಹಿಂಜರಿಯದ ಇತಿಹಾಸ ಪ್ರಸಿದ್ಧ ಊರು ಎಂದು ನುಡಿದರು.ಈ ಸಂಧರ್ಬದಲ್ಲಿ ಹಿರಿಯ ಕಲಾವಿದರಾದ ಕಲ್ಲಯ್ಯ ಸಂಗನಾಳಮಠ, ಪ್ರಭುದೇವ ಶಾಸ್ತ್ರಿಗಳು ಸೊಪ್ಪಿಮಠ, ಲಕ್ಷ್ಮಣ ಪಿರಗಾರ, ಲೋಹಿತಕುಮಾರ ಎಸ್ ರಾಮಶೆಟ್ಟಿ, ಯಲ್ಲಪ್ಪ ತಳವಾರ, ಮಂಜುನಾಥ ಕುರಿ ಇತರರು ಇದ್ದರು.  ಸುಗಮಸಂಗೀತವನ್ನ ವಿರಯ್ಯ ಸ್ವಾಮಿ ಆಡೂರ ಮತ್ತು ಜಾನಪದ ಸಂಗೀತವನ್ನ ಖಾನಸಾಬ್  ತಬಲಾಜಿ ಹಾರ್ಮೋನಿಯಂ ಸಾತ್‌ ಕಲ್ಲಯ್ಯ ಶಾಂತಗೇರಿಮಠ ತಬಲಾ ಸಿದ್ದು ಬಗರಕೇರ್  ಕಾರ್ಯಕ್ರಮದ ನಿರುಪಣೆಯನ್ನ ಶರಣು ಶೆಟ್ಟರ್ ನಡೆಸಿಕೊಟ್ಟರು.

ವರದಿ – ಸಂಪಾದಕೀಯಾ

Leave a Reply

Your email address will not be published. Required fields are marked *