ಮುಧೋಳ ಗ್ರಾಪಂ ಗೆ ಹನುಮವ್ವ ಅಧ್ಯಕ್ಷೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಯಲಬುರ್ಗಾ : ತಾಲೂಕಿನ ಮುಧೋಳ ಗ್ರಾಮ ಪಂಚಾಯತಿಗೆ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಹನುಮವ್ವ ಎಲ್ಲಪ್ಪ ವಡ್ಡರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರು ನಾಮಪತ್ರ ಸಲ್ಲಿಸದೆ ಇರುವುದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಎಂದು ತಾಲೂಕಿನ ತಹಸೀಲ್ದಾರರಾದ ಶ್ರೀ ಶೈಲ್ ತಳವಾರ್ ಅವರು ತಿಳಿಸಿದರು. ಒಟ್ಟು 18 ಜನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಇದ್ದರು. ಇವರಲ್ಲಿ ಮೂರು ಜನ ಸದಸ್ಯರು ಗೈರಾಗಿದ್ದರು ಒಟ್ಟು 15 ಜನ ಸದಸ್ಯರ ಒಮ್ಮತದಿಂದ ಅಧ್ಯಕ್ಷ ಸ್ಥಾನಕ್ಕೆ ಹನುಮವ್ವ ಎಲ್ಲಪ್ಪ ವಡ್ಡರ್ ಅವರನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರವಿಕುಮಾರ್ ಲಿಂಗಣ್ಣನವರ. ಉಪಾಧ್ಯಕ್ಷರಾದ ಚಂದ್ರಬಾಯಿ ಕುದರಿ. ಗ್ರಾಮಲೆಕ್ಕಾಧಿಕಾರಿಗಳು ಆದ ಕುಮಾರ್ ಪರಸಾಪುರ. ವೀರಭದ್ರಪ್ಪ ನಿಡಗುಂದಿ ಇದ್ದರು. ವಿಜಯೋತ್ಸವ : ನೂತನವಾಗಿ ಆಯ್ಕೆಯಾದ ಅಧ್ಯಕ್ಷರನ್ನು ಗ್ರಾಮ ಪಂಚಾಯಿತಿ ಸದಸ್ಯರೆಲ್ಲರೂ ಸೇರಿ ಸನ್ಮಾನಿಸಿದರು. ಬಳಿಕ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ. ಬಸಪ್ಪ ಅಕ್ಕಿ. ಖಾದಿರಭಾಷಾ ತೋಳಗಲ್. ಸುವರ್ಣ ಹರಿಜನ. ಕಳಕಪ್ಪ ಹಿರೇಹಾಳ ಮಹಾದೇವಿ ತಳವಾರ. ಶಿವರಾಜ ಆಡಗುಡಿ. ದುರಗಪ್ಪ ವಡ್ಡರ. ಚಂದ್ರಾಬಾಯಿ ಕುದರಿ. ಮಮತಾಜಬಿ ಹಿರೇಮನಿ. ನೀಲವ್ವ ಖಂಡೋಜಿ, ಅನಿತಾ ಹುನಗುಂದ. ಚನ್ನಬಸಯ್ಯ ಪೂಜಾರ. ಅಶೋಕ ಭಜಂತ್ರಿ. ಹಾಗೂ ಗ್ರಾಂಪಂ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನೂ ಹಲವಾರು ಸಾರ್ವಜನಿಕರು ಭಾಗವಹಿಸಿದ್ದರು.
ವರದಿ – ಹುಸೇನಬಾಷಾ ಮೋತೆಖಾನ್