aap ವತಿಯಿಂದ ತುಮಕೂರು ಗ್ರಾಮಾಂತರ ವಿಧಾನ ಸಭೆಯ ಅಕಾಂಕ್ಷಿಯಾದ ವಕೀಲರು, ಚಲನಚಿತ್ರ ನಿರ್ದೇಶಕರಾದ ದಿನೇಶ್ ಕುಮಾರ್ ಬಿ ಸ್ಪರ್ಧೆ.
ಭ್ರಷ್ಟಾಚಾರದ ಅಡಳಿತದಲ್ಲಿ ಭ್ರಷ್ಠಚಾರವನ್ನೆ ಕಿತ್ತೆಸಿಯಲು ಸಜ್ಜಾಗುತ್ತಿರುವ ಎಎಪಿ ಪಣತೊಟ್ಟು ನಿಂತಿದೆ. ಪ್ರಜ್ಞಾವಂತರು ಒಂದಾಗಿ ಭ್ರಷ್ಠಚಾರ ಮುಕ್ತ ಮಾಡಲು ಯುವಕರ ತಂಡ ಸಜ್ಜಾಗಿ ನಿಂತಿದೆ. ಒಟ್ಟಿನಲ್ಲಿ ನಮ್ಮ ರಾಜ್ಯದ ರಾಜಧಾನಿಯಾದ ದೇಹೆಲಿ ರಾಜ್ಯದಲ್ಲಿ ನಡೆಯುವ ರಾಜಕೀಯ ಹಾಗೂ ಜನರಿಗೆ ಕಲ್ಫಿಸಿಕೊಡುವ ಸರ್ವ ಯೋಜನೆಗಳ ಬಗ್ಗೆ, ಸಂಪೂರ್ಣವಾಗಿ ಒದಗಿಸುವಲ್ಲಿ ಯಶಸ್ವಿಯಾಗಿ ದೇಹೆಲಿಯಲ್ಲಿ ಎರಡು ಭಾರಿ ರಾಜ್ಯವನ್ನೆ ಕೈಗೆತ್ತಿಕೊಂಡು, ಪಂಜಾಬ ರಾಜ್ಯವನ್ನು ಸಹ ಕೈಗೆತ್ತಿಕೊಳ್ಳಲು ಸಹಕರಿಸಿದ ಜನತೆಗೆ ಎಎಪಿ ಒಂದಿಸಿದ್ದಾರೆ. ಅದೇ ರೀತಿ ಕರ್ನಾಟಕ ರಾಜ್ಯವನ್ನು ಮುಂದಿನ ಚುನಾವಣೆಯಲ್ಲಿ ಎಎಪಿ ಪಕ್ಷವನ್ನು ಗೆಲ್ಲಿಸಲು ಕರ್ನಾಟಕದ ಜನತೆ ಸಹಕರಿಸಬೇಕು, ಜೊತೆಗೆ ಪ್ರಜ್ಞಾವಂತರು ಒಂದಾಗಿ ನಿಲ್ಲಬೇಕು. ಆಮ್ ಆದ್ಮಿ ಪಾರ್ಟಿಗೆ ತುಮಕೂರು ಜಿಲ್ಲಾ ಕಾರ್ಯಕ್ರಮದಲ್ಲಿ ದೊಡ್ಡ ಯುವಕರ ತಂಡವೆ ಸೇರ್ಪಡೆ ಆಗಿದೆ ತುಮಕೂರು ಗ್ರಾಮಾಂತರ ವಿಧಾನ ಸಭೆಗೆ aap ಇಂದ ಆಕಾಂಕ್ಷಿಯಾಗಿ ವಕೀಲರು, ಚಲನಚಿತ್ರ ನಿರ್ದೇಶಕರು ಆದ ದಿನೇಶ್ ಕುಮಾರ್ ಬಿ ಸ್ಪರ್ಧೆ ಮಾಡಲು ಉತ್ಸುಕಾರಾಗಿದ್ದಾರೆ ಜೊತೆಗೆ ರುದ್ರೇಶ್. ಜಿ, ಸುರೇಶ. ಕೆ ಆರ್. ಗುರುಮೂರ್ತಿ. ಬಿ. ಕುಮಾರ್.ಬಿ.ಸಿ. ನಾರಾಯಣ.ಬಿ.ಏನ್. ಹಾಗೂ ಇನ್ನೂ ಇತರರು aap ಯ ಜಿಲ್ಲಾ ಉತ್ಸುವಾರಿಗಳಾದ ಡಾ,ವಿಶ್ವಾಸ್, ಜಯರಾಮ್ ಕುಣಿಗಲ್, ಗುಬ್ಬಿಯ ಪ್ರಭುಸ್ವಾಮಿ, ಪ್ರಕಾಶ್, ಜಿಲ್ಲೆಯ 11 ಕ್ಷೇತ್ರದ ಎಲ್ಲ ಅಧ್ಯಕ್ಷರು ಹಾಗೂ ಕಾರ್ಯಕರ್ತರ ಮುಂದೆ ಪಕ್ಷಕೆ ಸೇರ್ಪಡೆ ಮಾಡಿಕೊಂಡರು, ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಶುಭ ಹಾರೈಸಿದರು. ದಿನೇಶಕುಮಾರ್ ಮಾತನಾಡುತ್ತ ತುಮಕೂರು ಗ್ರಾಮಾಂತರದಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿ ಬಡವರ ಮಕ್ಕಳು ಕೂಡ ಉತ್ತಮ ವಿದ್ಯಾಭ್ಯಾಸ ಪಡೆಯುವಂತಾಗಲಿ ಎಲ್ಲ ಜಾತಿ ಧರ್ಮ ಬಿಟ್ಟು ಒಟ್ಟಾಗಿ ಕ್ಷೇತ್ರದ ಹಾಗೂ ಜನರ ಅಭಿವೃದ್ಧಿಗೆ ದೊರೆಯದ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಅವಿರತ ಶ್ರಮಿಸುತ್ತೇವೆ ಎಂದು ಹೇಳಿದರು. ರುದ್ರೇಶ್ ಮಾತನಾಡುತ್ತ ಗ್ರಾಮಾಂತರ ಕ್ಷೇತ್ರದಲ್ಲಿ ಬದಲಾವಣೆಗೆ ಯುವಕರು ಹಾಗೂ ಹಿರಿಯರು ಸ್ತ್ರೀಯರ ತಂಡ ಹಾತೋರೆಯುತ್ತಿದೆ ಎಂದು ಹೇಳಿದರು.
ವರದಿ – ಸಂಪಾದಕೀಯಾ
🙏🏻💐💐💐💐🙏🏻
ಧನ್ಯವಾದಗಳು ಮೇಡಂ