ಕೂಡ್ಲಿಗಿ: ಮಕ್ಕಳು ಸಾಂಸ್ಕೃತಿಕ ರಾಯಭಾರಿಗಳು- ಬಿ.ಬಿ.ಶಿವಾನಂದ.- ವಿಜಯನಗರ ಜಿಲ್ಲೆ ಕೂಡ್ಲಿಗಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪಟ್ಟಣದ ಜ್ಞಾನಭಾರತಿ ಶಾಲಾವರಣದಲ್ಲಿ ಆಯೋಜಿಸಿದ್ದ..
ಕೂಡ್ಲಿಗಿ: ಮಕ್ಕಳು ಸಾಂಸ್ಕೃತಿಕ ರಾಯಭಾರಿಗಳು- ಬಿ.ಬಿ.ಶಿವಾನಂದ.- ವಿಜಯನಗರ ಜಿಲ್ಲೆ ಕೂಡ್ಲಿಗಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪಟ್ಟಣದ ಜ್ಞಾನಭಾರತಿ ಶಾಲಾವರಣದಲ್ಲಿ ಆಯೋಜಿಸಿದ್ದ. ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ್ ನಾಯಕ್ ಮಾತನಾಡಿದರು, “ನಮ್ಮ ದೇಶದ ಉನ್ನತ ಕಲೆಗಳನ್ನು ವಿದ್ಯಾರ್ಥಿಗಳ ಮೂಲಕ ಕಾಪಿಡಬೇಕಿದೆ. ಈ ನಿಟ್ಟಿನಲ್ಲಿ ಶಾಲೆಗಳು ಮತ್ತು ಶಿಕ್ಷಕರು ಕಾರ್ಯೋನ್ಮುಖರಾಗಬೇಕು.ಪ್ರತಿಭಾ ಕಾರಂಜಿಯು ಮಕ್ಕಳ ನೈಜ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ನೆರವಾಗಿತ್ತದೆ” ಎಂದು ಕರೆ ನೀಡಿದರು.ಕೂಡ್ಲಿಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಎಮ್.ಶಾರದಾ ಬಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮ ಕುರಿತು ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ತಿಪ್ಪೇಸ್ವಾಮಿ ಕೆ.ಎಂ, ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಶಿವರಾಜ್ ಪಿ., ಕೊಟ್ಟೂರು ಅಧ್ಯಕ್ಷ ಜಗದೀಶ್ ನಾಯ್ಕ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೂಡ್ಲಿಗಿ ಅಧ್ಯಕ್ಷ, ಗೌಡ್ರು ಕೊಟ್ರೇಶ್, ಕೊಟ್ಟೂರು ಅಧ್ಯಕ್ಷ ಸಿದ್ದಲಿಂಗಪ್ಪ ಅಣಜಿ, ಪ್ರೌಢಶಾಲೆ ಸಹ ಶಿಕ್ಷಕರು ಸಂಘದ ಕೊಟ್ಟೂರು ಅಧ್ಯಕ್ಷ ಸಿದ್ದಪ್ಪ, ಕೂಡ್ಲಿಗಿ ಅಧ್ಯಕ್ಷ ಸಿದ್ಧಾರಾಧ್ಯ ಎಸ್. ವಿ.,ಕ್ಷೇತ್ರ ಸಮನ್ವಯಾಧಿಕಾರಿ ಎಸ್. ಎಸ್. ಜಗದೀಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾ ಕಾರ್ಯದರ್ಶಿ ಬಿ.ಬಿ.ಶಿವಾನಂದ ಮಾತನಾಡಿದರು, “ಇಂದಿನ ವಿದ್ಯಾರ್ಥಿಗಳು ಭಾರತದ ಭವ್ಯ ಪರಂಪರೆ-ಶ್ರೀಮಂತ ಕಲೆ-ಸಂಸ್ಕೃತಿಗಳನ್ನು ಜಗತ್ತಿಗೆ ಪಸರಿಸುವ ಸಾಂಸ್ಕೃತಿಕ ರಾಯಭಾರಿಗಳಾಗಬೇಕು. ಭಾರತವು ಜಗತ್ತಿಗೆ ಜ್ಞಾನ ಗುರುವಾಗುವಂತೆ ಯುವ ಮನಸುಗಳು ದುಡಿಯಬೇಕು” ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ, ಈ ಗೀತಾ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗೇಶ್ ಪಿ. ತಾಲೂಕು ಕಾರ್ಯದರ್ಶಿಗಳಾದ ಶೇಖರಯ್ಯ ಟಿ.ಹೆಚ್.ಎಂ., ಮರುಳಗೌಡ ಡಿ.ಎಸ್. ಖಜಾಂಚಿಗಳಾದ ನಂದೀಶ್ವರನಾಯಕ್, ಮುತ್ತೇಶ್ ಬಿ., ಉಪಾಧ್ಯಕ್ಷರಾದ ಹನುಮಂತಪ್ಪ ಎಚ್.ಜಿ., ಇಂದಿರಾ ಎಚ್., ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶಶಿಧರ್ ಕೆ. ಹೆಚ್.ಎಂ, ಶಿಕ್ಷಕರ ಸಂಘದ ಸಹಕಾರ್ಯದರ್ಶಿ ಗೀತಾ ಬಾಫ್ರಿ, ಸಂಘಟನಾ ಕಾರ್ಯದರ್ಶಿ ಶಾಂತಕುಮಾರಿ ಎಸ್., ಸದಸ್ಯರಾದ ಪುಟ್ಟಪ್ಪ ಎನ್, ಕೆ. ಗೋಣಿಬಸಪ್ಪ, ನೌಕರರ ಸಂಘದ ಉಪಾಧ್ಯಕ್ಷ ಪಾಂಡುರಂಗ ಎಸ್, ಸಂಘಟನಾ ಕಾರ್ಯದರ್ಶಿ ಬಸವರಾಜ ಆರ್.ಬಿ. ಶಿಕ್ಷಣ ಸಂಯೋಜಕರು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಸಮೂಹ ಸಂಪನ್ಮೂಲ ವ್ಯಕ್ತಿಗಳು 800ಕ್ಕೂ ಹೆಚ್ಚು ಸ್ಪರ್ಧಿಗಳು ಹಾಗೂ ತೀರ್ಪುಗಾರರು ಹಾಜರಿದ್ದರು. ವಾಣಿ ಮತ್ತು ತಂಡದವರು ಪ್ರಾರ್ಥನೆ ಮಾಡಿದರು. ಬಿ.ಆರ್.ಪಿ. ನಾಗರಾಜ್ ಕೆ, ಸ್ವಾಗತಿಸಿದರು. ಇ.ಸಿ.ಓ. ಆನಂದ್ ನಿರೂಪಿಸಿದರು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕೆ.ಜಿ. ಆಂಜನೇಯ ವಂದಿಸಿದರು.
✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428